Testo Jagave Ondu Ranaranga - Dr. Rajkumar
Testo della canzone Jagave Ondu Ranaranga (Dr. Rajkumar), tratta dall'album Rasikara Raja Dr. Rajkumar Birthday Special
ಜಗವೇ ಒಂದು ರಣ ರಂಗ
ಧೈರ್ಯ ಇರಲಿ ನಿನ ಸಂಘ
ಬಾರೋ ಬಾರೋ ನನ್ನ ರಾಜ
ನಿನಗೆ ನೀನೇ ಮಹಾರಾಜ
ತಿಳಿಯೋ ಆತ್ಮ ಬಲದಸ್ತ್ರ
ಅದುವೇ ಜಯದ ಮಹಾಮಂತ್ರ
ನಿನ್ನ ದಾರಿಯಲ್ಲಿ ಎಲ್ಲೂ ಸೋಲೆ ಇಲ್ಲ
ಬಾಳ ಯುದ್ದದಲ್ಲಿ ನಿನ್ನ ಗೆಲ್ಲೋರಿಲ್ಲ
ಛಲವೇ ಬಲವೋ ಮಂದೆ ನುಗ್ಗಿ ನುಗ್ಗಿ ಬಾ
ಜಗವೇ ಒಂದು ರಣ ರಂಗ
ಧೈರ್ಯ ಇರಲಿ ನಿನ ಸಂಘ
ಬಾರೋ ಬಾರೋ ನನ್ನ ರಾಜ
ತಿರುಗೋ ಭೂಮಿಯಲ್ಲಿ ನಡೆವ ಬಾಳಿನಲ್ಲಿ ಏನು ನಿಲ್ಲದಮ್ಮ ರಾಜ
ಜನನ ಎಂಬುದಿಲ್ಲಿ ಮರಣ ಎಂಬುದಲ್ಲ ಎಂದೂ ಗೆಲ್ಲದಮ್ಮ ರಾಜ
ಜನ ಇರುವ ಗೋಲವೋ ಇದು ದಿನ ಕಳೆವ ಜಾಲವೋ ಇದು
ಜಯ ಭಯದ ಚಿಂತೆ ಮಾಡದೆ ಸೆಣೆಸಾಡುವ ರಂಗವೋ ಇದು
ಇಲ್ಲಿ ದಾನವರ ಕೆಟ್ಟ ಮಾಯವಿದೆ ಇಲ್ಲಿ ಮಾನವರ ಸುಟ್ಟ ಗಾಯವಿದೆ
ಇದ್ದರೆ ಗೆದ್ದರೆ ನ್ಯಾಯವನ್ನು ಉಳಿಸು ಬಾ
ಜಗವೇ ಒಂದು ರಣರಂಗ
ಧೈರ್ಯ ಇರಲಿ ನಿನ ಸಂಘ
ಬಾರೋ ಬಾರೋ ನನ್ನ ರಾಜ
ದೇಹಿ ಎನ್ನುವಾಗ ನಿದ್ದೆ ಮಾಡುವಾಗ ಕತ್ತಿ ಎತ್ತಬೇಡ ರಾಜ
ಶತ್ರು ಬೀಳುವಾಗ ಯುದ್ದ ಮಾಡುವಾಗ ಕರುಣೆ ಕಟ್ಟಿಯಿಡು ರಾಜ
ಭೂಮಿಲಿ ಹುಟ್ಟಿ ಬಂದರೆ ಆ ಋಣವ ಕಟ್ಟ ಬೇಡವೇ
ಅನ್ಯಾಯ ಗೆಲ್ಲುತ್ತಿದ್ದರೆ ಸಿಡಿದೆದ್ದು ನಿಲ್ಲಬೆಡವೇ
ಇಲ್ಲಿ ಕ್ರೂರತನ ಅಟ್ಟದಲ್ಲಿ ಇದೆ
ನಿನ್ನ ಜಾಣತನ ಮೆಟ್ಟುವಲ್ಲಿ ಇದೆ
ಮೆಟ್ಟು ಬಾ ಅಟ್ಟು ಬಾ ದಿಟ್ಟ ಹೆಜ್ಜೆ ಇಟ್ಟು ಬಾ
ಜಗವೇ ಒಂದು ರಣರಂಗ
ಧೈರ್ಯ ಇರಲಿ ನಿನ್ನ ಸಂಘ
ಬಾರೋ ಬಾರೋ ನನ್ನ ರಾಜ
ನಿನಗೆ ನೀನೆ ಮಹಾರಾಜ
ತಿಳಿಯೋ ಆತ್ಮ ಬಲದಸ್ತ್ರ
ಅದುವೇ ಜಯದ ಮಹಾಮಂತ್ರ
ನಿನ್ನ ದಾರಿಯಲ್ಲಿ ಎಲ್ಲೂ ಸೋಲೆ ಇಲ್ಲ
ಬಾಳ ಯುದ್ದದಲ್ಲಿ ನಿನ್ನ ಗೆಲ್ಲೋರಿಲ್ಲ
ಛಲವೇ ಬಲವೋ ಮಂದೆ ನುಗ್ಗಿ ನುಗ್ಗಿ ಬಾ
ಜಗವೇ ಒಂದು ರಣ ರಂಗ
ಧೈರ್ಯ ಇರಲಿ ನಿನ ಸಂಘ
ಬಾರೋ ಬಾರೋ ನನ್ನ ರಾಜ
Credits
Writer(s): Hamsalekha
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.