Testo Beesadiru - Vani Jayaram
Testo della canzone Beesadiru (Vani Jayaram), tratta dall'album Anuraaga Aralithu (Original Motion Picture Soundtrack)
ಬೀಸದಿರು
ತಂಗಾಳಿ
ತಂಪನ್ನು ಚೆಲ್ಲಾಡಿ
ಝುಮ್ಮನ್ನೋ ಮೈಯನ್ನು ಸೋಕುತ್ತಾ ಕಾಡುತ್ತಾ
ಬೀಸದಿರು ತಂಗಾಳಿ
ತಂಪನ್ನು ಚೆಲ್ಲಾಡಿ
ಝುಮ್ಮನ್ನೋ ಮೈಯನ್ನು ಸೋಕುತ್ತಾ ಕಾಡುತ್ತಾ
ಬೀಸದಿರು
ಕಾಡಲ್ಲಿ ಮೊಗ್ಗೊಂದು ಅರಳಿ ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು ಕಣ್ಣೀರು ಬಂದಾಗಲೇ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತಾ ಸೋಕುತ್ತಾ ಕಾಡುತ್ತಾ
ಬೀಸದಿರು
ತಂಗಾಳಿ
ತಂಪನ್ನು ಚೆಲ್ಲಾಡಿ
ಝುಮ್ಮನ್ನೋ ಮೈಯನ್ನು ಸೋಕುತ್ತಾ ಕಾಡುತ್ತಾ
ಬೀಸದಿರು
ಹೂವಂಥ ಈ ಮೆತ್ತೆ ಇಂದು ಮುಳ್ಳಂತೆ ಏಕಾಯಿತು
ಆ ಚಂದ್ರನ ಕಾಂತಿ ಸೋಕಿ ಮೈಯೆಲ್ಲಾ ಬಿಸಿಯಾಯಿತು
ಒಂಟಿ ಬಾಳಿನ್ನು ಸಾಕು ಸಾಕಿಂದು ನಾನಿಂದು ನೊಂದಾಗಲೇ
ಚಳಿ ತುಂಬುತಲಿ ಈ ರಾತ್ರಿಯಲಿ
ಚಳಿ ತುಂಬುತಲಿ ಈ ರಾತ್ರಿಯಲಿ
ಸಂಗಾತಿ ಎಲ್ಲೆಂದು ಕೇಳುತ್ತಾ ಕಾಡುತ್ತಾ
ಬೀಸದಿರು
ತಂಗಾಳಿ
ತಂಪನ್ನು ಚೆಲ್ಲಾಡಿ
ಝುಮ್ಮನ್ನೋ ಮೈಯನ್ನು ಸೋಕುತ್ತಾ ಕಾಡುತ್ತಾ
ಬೀಸದಿರು
ತಂಗಾಳಿ
Credits
Writer(s): Chi Udayashanker, Upendra Kumar
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.