Testo Onde Usirante - From "Habba" - Rajesh Krishnan feat. K. S. Chithra
Testo della canzone Onde Usirante - From "Habba" (Rajesh Krishnan feat. K. S. Chithra), tratta dall'album Best of Rajesh Krishnan - Kannada Hits 2016
ಹಾಡು ಹಾಡು ಒಂದು ಹಾಡು ಹಾಡು
ಹಾಡದಿದ್ದರೆ ನನ್ನ ಹಾಡು ಕೇಳು
ಉಸಿರು ಕಟ್ಟಿ ಹಾಡುವೆ ಈ ಹಾಡು
ಈ ಉಸಿರು ನಿಂತರೆ ನಿಂಗೇ ನಷ್ಟ ನೋಡು
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು
ನೀನೇ ನಾನು ನಾನೇ ನೀನು
ಒಂದೇ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು
ಬೇರೆ ಎಂದರೆ ಅರ್ಥ ಏನು
ಹಾಡೇ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು
ಕೇಳೇ ಕೋಗಿಲೆ ನನ್ನ ಕೊರಳಿನಲಿ ನಿನ್ನ ಹೆಸರೇ ಕೊನೆಯ ಮಾತು
ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಕೊಡುವೆ ನನ್ನ ಪ್ರಾಣ ಪ್ರೀತಿ
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಅಲ್ಲ ಇನ್ನು
ನೀನೇ ನಾನು ನಾನೇ ನೀನು
ಎತ್ತ ಇತ್ತೋ ಎಂತೋ ಬಂತೋ ಕಾಣೆ ನಾನು
ಒಂದೇ ಧೈರ್ಯ ಒಂದೇ ಹುರುಪು
ಹಾಡೋ ಹಂಬಲ ತಂದೆ ನೀನು
ಕೋಟಿ ಕೋಗಿಲೆ ಒಂದೇ ಉಸಿರಿನಲಿ
ಪ್ರೀತಿ ಮಾಡು ಪ್ರೀತಿಯ ಬೇಡು
ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ
ಅಂತರಂಗದ ಸಹ್ಯಾದ್ರಿ ಮಡಿಲಲಿ
ನೂರು ನವಿಲಾಗಿ ಹೃದಯ
ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ
ಕಾದಿದೆ ಕಾದಿದೆ ಪ್ರೀತಿ ನೀಡಲು
ಒಂದೇ ಉಸಿರಲಿ ನಿಂತಿದೆ ನಿಂತಿದೆ
ಇಂದು ಪ್ರೀತಿಯು ಹಾಡಿದ ಪರ್ವ ದಿನ
ಇಂದು ಪ್ರೀತಿಯು ಹಾಡಿದ ಪರ್ವ ದಿನ
ಅದ ಕೇಳಲು ದಕ್ಕಿದ ಪುಣ್ಯ ದಿನ
ಅದು ಬೆಳಕಂತೆ ಮುಟ್ಟಲಾಗದಂತೆ
ಬೆಳದಿಂಗಳಂತೆ ಅಪ್ಪಲಾಗದಂತೆ
ಗೆಳತಿ ಗೆಳತಿ ಪ್ರೀತಿಯ ಗೆಳತಿ
ನೀನೇ ನನ್ನೀ ಪ್ರೀತಿಯ ಒಡತಿ
ಬ್ರಹ್ಮ ಭಾರಿ ಜಾಣ ಜಾಣ
ನಾರೀಲಿಟ್ಟ ಪ್ರೀತಿ ಪ್ರಾಣ
ನಾರಿ ನೀನೇ ಪ್ರೀತಿಯ ರೂಪ
ನೀನೇ ತಾನೇ ಹೃದಯದ ದೀಪ
ಹೊತ್ತಿಕೊಂಡಿತಮ್ಮ ನಮ್ಮ ಪ್ರೀತಿ ಜ್ಯೋತಿ
ಗಾಳಿ ಅಲ್ಲ ಮಳೆಯೂ ಅಲ್ಲ
ಭೂಮಿ ಬಿರಿದರು ಆರೋದಿಲ್ಲ
ಒಂದೇ ದೀಪದಂತೆ ಇನ್ನು ನಾನು ನೀನು
ಎಣ್ಣೆ ದಾರ ಬೇರೆ ಏನು
ಬೇರೆ ಎಂದರೆ ಅರ್ಥ ಏನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗೂ ಹೋಲಿಸು
ಚಂದಮಾಮನೇ ನೋಡೋ ನಮ್ಮಾಣೆಯ ನಮ್ಮಿಂದಂತು ಪ್ರೀತಿಗೆ ದ್ರೋಹ
ಆಗದು ಆಗದು ಎಂದಿಗೂ ಆಗದು
ಆಗುವೂದಾದರೆ ಇಂದೇ ಆಗಲಿ
ಆಗುವ ಮೊದಲೇ ಪ್ರಾಣ ಹೋಗಲಿ
ಚಂದನ ಚಂದನ ಕಂಪಿನ ಚಂದನ
ನಿನ್ನೀ ಉಸಿರಿನ ಕಸ್ತೂರಿ ಸಿಂಚನ
ಕಂಪನ ಕಂಪನ ಇಂಪಿನ ಕಂಪನ
ನಿನ್ನೀ ಮಾತಿನ ಅಮೃತ ಸಿಂಚನ
ಗಾಯನ ಗಾಯನ ನಿನ್ನೀ ಪ್ರೀತಿಯ
ಜೀವನ ಚೇತನ ಗಾಯನ ಗಾಯನ
ಅಯನ ಅಯನ ನಿನ್ನ ನೆರಳಲಿ
ನನ್ನೀ ಜನುಮದ ಪ್ರೇಮಾಯನ
ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ
ಕಲ್ಲಿರಲಿ ಕಲ್ಲು ಮುಳ್ಳಿರಲಿ
ನಡೆ ಮಳೆಯಿರಲಿ ಮಳೆ ಬಿಸಿಲಿರಲಿ
ಪ್ರೇಮಾಯನಕೆ ನಿನ್ನ ನೆರಳಿರಲಿ
ಜನುಮಾಯನಕೆ ನಿನ್ನ ಕೊಡೆಯಿರಲಿ
ಭಯವಿಲ್ಲ ಇನ್ನು ಭಯವಿಲ್ಲ
ನನ್ನ ನಿರ್ಧಾರ ಇನ್ನು ನನದಲ್ಲ
ನನ್ನಾ ಎದೆಯಲೊಬ್ಬ ಚಂದ್ರ
ಬೆಳ್ಳೀ ಬೆಳಕ ತಂದ ತಂದ
ಪ್ರೀತಿಯಂದರೇನು ಅಂದ
ಕೇಳಿ ತಾನೇ ಉತ್ತರ ತಂದ
ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು
ಏಳು ಬಣ್ಣ ಸೇರಿ ಬೀಳೋ
ಪಾದ ಹಾಗೆ ನೀನು ನಾನು
ಒಂದೇ ಹಾಡಂತೆ ಇನ್ನು ನಾನು ನೀನು
ಎಲ್ಲಾ ಭಾವ ಕೂಡಿಕೊಂಡ
ಬಾಳಿನಂತೆ ನಾನು ನೀನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗೂ ಹೋಲಿಸು
ಚಂದಮಾಮನೇ ಕೇಳೋ ನಮ್ಮಾಣೆಯ
ನಮ್ಮಿಂದಂತು ಪ್ರೀತಿಗೆ ದ್ರೋಹ
ಆಗದು ಆಗದು ಎಂದೂ ಆಗದು
ಆಗುವೂದಾದರೆ ಇಂದೇ ಆಗಲಿ
ಆಗುವ ಮೊದಲೇ ಪ್ರಾಣ ಹೋಗಲಿ
ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು
ನೀನೇ ನಾನು ನಾನೇ ನೀನು
ಒಂದೇ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು
ಬೇರೆ ಎಂದರೆ ಅರ್ಥ ಏನು
ಹಾಡೇ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು
ಕೇಳೇ ಕೋಗಿಲೆ ನನ್ನ ಕೊರಳಿನಲಿ
ನಿನ್ನ ಹೆಸರೇ ಕೊನೆಯ ಮಾತು
ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಕೊಡುವೆ ನನ್ನ ಪ್ರಾಣ ಪ್ರೀತಿ
Credits
Writer(s): Hamsalekha Hamsalekha
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.
Altre canzoni dell'album
Nooru Janmaku - From "Nooru Janmaku"
Hombale Hombale - From "Nannaseya Hoove"
Usire Usire - From "Huchcha"
Manase Manase - From "Ranga S.S.L.C."
Moda Modalu - From "Yeswanth"
Malli Malli Minchulli - From "Hava"
Usiraaguve - From "Bahupaarak"
Prema Chandrama - From "Yejamana"
Telephone Gelathi - From "Kushalave Kshemave"