Testo Nenape Nithya Mallige - Karthik
Testo della canzone Nenape Nithya Mallige (Karthik), tratta dall'album Kendasampige
ನೆನಪೇ ನಿತ್ಯ ಮಲ್ಲಿಗೆ
ಕನಸು ಕೆಂಡಸಂಪಿಗೆ
ಎಷ್ಟು ಚಂದ ಶಿಕ್ಷೆ ಒಂದು ಸಣ್ಣ ತಪ್ಪಿಗೆ
ಸರಸ ಪಾರಿಜಾತವು
ವಿರಹ ಚೂಪು ಕೇದಿಗೆ
ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ
ನೆನಪೇ ನಿತ್ಯ ಮಲ್ಲಿಗೆ
ನಿನ್ನ ಕೆನ್ನೆಯಿಂದ ಬಂತೆ ಬಾನಿಗೆ ಕನಕಾಂಬರ
ಬಹಳ ಮುದ್ದು ನಿನ್ನ ಮಾತಿನಲ್ಲಿ ವಿಷಯಾಂತರ
ನಿನ್ನ ನಗುವು ಜೊಂಪೆ ಜೊಂಪೆ ನಂದ ಬಟ್ಟಲು
ಆಸೆ ನನಗೆ ಉಸಿರಿನಲ್ಲಿ ಮಾಲೆ ಕಟ್ಟಲು
ಎಸ್ಟು ಪಕಳೆ ಉಂಟು ಹೇಳು ಸೇವಂತಿಗೆ
ಅಷ್ಟೇ ಬಗೆಯ ಸೆಳೆತ ನನಗೆ ನಿನ್ನೊಂದಿಗೆ
ನೆನಪೇ ನಿತ್ಯ ಮಲ್ಲಿಗೆ
ಹಿಗ್ಗಿನಲ್ಲಿ ಅರಳಿ ನಿನ್ನ ಮುಖವೇ ದಾಸವಾಳವು
ಮತ್ತೆ ಮತ್ತೆ ಚಿಟ್ಟೆ ಹಾರಿ ಬಂದು ಮೋಸ ಹೋದವು
ಗುಟ್ಟು ಮಾಡುವಾಗ ಏನೋ ದಿಟ್ಟ ಕಡಗಿಲೆ
ತೊಟ್ಟು ಜೇನಿಗಾಗಿ ನಿನ್ನ ಮುಂದೆ ಕುಣಿಯಲೇ
ಅಂಟಿಕೊಂಡ ದಿವ್ಯಗಂಧ ನೀನು ಸುರಗಿಯೇ
ನಿನ್ನ ಸ್ವಪ್ನ ಕಂಡೆ ನಿನ್ನ ಎದೆಗೆ ಒರಗಿಯೇ
ನೆನಪೇ ನಿತ್ಯ ಮಲ್ಲಿಗೆ
ಕನಸು ಕೆಂಡಸಂಪಿಗೆ
ಎಷ್ಟು ಚಂದ ಶಿಕ್ಷೆ ಒಂದು ಸಣ್ಣ ತಪ್ಪಿಗೆ
ಸರಸ ಪಾರಿಜಾತವು
ವಿರಹ ಚೂಪು ಕೇದಿಗೆ
ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ
ನೆನಪೇ ನಿತ್ಯ ಮಲ್ಲಿಗೆ
Credits
Writer(s): Harikrishna V, Kaikini Jayant
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.