Testo Ee Janumave Ahaa - Kailash Kher
Testo della canzone Ee Janumave Ahaa (Kailash Kher), tratta dall'album Oggarane (Original Motion Picture Soundtrack)
ಈ ಜನುಮವೇ ಆಹಾ! ದೊರಕಿದೆ ರುಚಿ ಸವಿಯಲು
ಆಹಾ!
ಆಹಾ!
ಈ ಜಗವಿದೆ ನವರಸಗಳ ಉಣ ಬಡಿಸಲು
ಬಿಸಿ ಬಿಸಿ ಇದೆ
ಬಿಸಿ ಬಿಸಿ ಇದೆ ನಳಪಾಕ ದಿನ ದಿನ ನೂತನ
ಈ ಬಿಸಿಯು ಆರುವ ಮೊದಲೇ ಎಲ್ಲರ ಜೊತೆಯೇ ಮೆಲ್ಲುವ ಕಲೆಯೇ ಜೀವನ
ಜನುಮವೇ
ಈ ಜನುಮವೇ ಆಹಾ! ದೊರಕಿದೆ ರುಚಿ ಸವಿಯಲು
ಈ ಜನುಮವೇ ಆಹಾ! ದೊರಕಿದೆ ರುಚಿ ಸವಿಯಲು
ಈ ಜಗವಿದೆ ನವರಸಗಳ ಉಣ ಬಡಿಸಲು
ಉಚ್ಚೆಳ್ಳು ಗಂಜಿ ಉಪ್ಪಿನಕಾಯಿ ಹೇಗೆ ಮಾಡಿವೆ ಗೆಳೆತನ
ತುಪ್ಪಕ್ಕೆ ಬಿದ್ದ ಹೋಳಿಗೆಗೀಗ ಬೇಕು ಮಾವಿನ ರಸಾಯನ
ಹುಬ್ಬಳ್ಳಿ ರೊಟ್ಟಿಕಾಳು
ತಿಂದವ್ನೆ ಗಟ್ಟಿಯಾಳು
ಮಂಡ್ಯದ ಮುದ್ದೆ ಬಾಡು
ಉಂಡು ನೀ ನಿದ್ದೆ ಮಾಡು
ಅಂಕೋಲ ಕೋಳಿ ಸಾರು
ಮೂಗಲ್ಲು ನೀರು ಜೋರು
ಕುಂದಾಪುರ ಕಾನೆ ಮೀನು
ಇನ್ನೆಲ್ಲೂ ಕಾಣೆ ನೀನು
ಹಂಚಿ ಉಂಡರೆ ಅಧಿಕವಾಗುವ ಸರಳ ಸ್ನೇಹದ ವಿರಳ ರುಚಿಯಿದು
ಜನುಮವೇ
ಆಹಾಹಾಆಹಾಹಾಹಾಹಾಆಹಾಹಾ
ಈ ಜಗವಿದೆ
ಈ ಜನುಮವೇ ಆಹಾ! ದೊರಕಿದೆ ರುಚಿ ಸವಿಯಲು
ದುಡಿವ ಜನರು ಬಿಡುವಿನಲ್ಲಿ ತೆರೆವ ಬುತ್ತಿಯೇ ಬಲು ರುಚಿ
ಬೆರಳು ಚೀಪಿ ಉಂಡ ಮನಕೆ ಬದುಕಿನಲ್ಲಿಯು ಅಭಿರುಚಿ
ಮಾವಿನ್ಕಾಯಿ ಚಿತ್ರಾನ್ನಾನ್ನ
ಮೈಸೂರಲ್ ತಿಂದೋನು ಜಾಣ
ಮನೆಗೆಷ್ಟೇ ನೆಂಟ್ರು ಬರಲಿ
ಮಲ್ನಾಡಲ್ ತಾಜ ತಂಬ್ಲಿ
ದಾವಣ್ಗೆರೆ ಬೆಣ್ಣೆ ದೋಸೆ
ಬೀರೂರಲ್ ತಿನ್ನೋ ಆಸೆ
ಪಟ್ಟೇಗಾರ್ ಬಿರಿಯಾನಿಗೆ
ಬಾ ಬಾರೋ ಬೆಳಗಾವಿಗೆ
ಓಲೆಯ ಮುಂದೆ ಉರಿವ ಅಮ್ಮನ ಮಮತೆಯಿಂದಲೇ ಕಲಿತ ಫಲವಿದು
ಜನುಮವೇ ಆಹಾ! ದೊರಕಿದೆ ರುಚಿ ಸವಿಯಲು
ಬಿಸಿ ಬಿಸಿ ಇದೆ
ಬಿಸಿ ಬಿಸಿ ಇದೆ ನಳಪಾಕ ದಿನ ದಿನ ನೂತನ
ಈ ಬಿಸಿಯು ಆರುವ ಮೊದಲೇ ಎಲ್ಲರ ಜೊತೆಯೇ ಮೆಲ್ಲುವ ಕಲೆಯೇ ಜೀವನ
ಜನುಮವೇ ಆಹಾ! ದೊರಕಿದೆ ರುಚಿ ಸವಿಯಲು
ಈ ಜನುಮವೇ ಆಹಾ! ದೊರಕಿದೆ ರುಚಿ ಸವಿಯಲು, ಸವಿಯಲು, ಸವಿಯಲು
Credits
Writer(s): Ilaiyaraaja, Jayant Kaikini
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.