Testo Bisilu Kudure - Rajesh Krishna
Testo della canzone Bisilu Kudure (Rajesh Krishna), tratta dall'album Googly
ಬಿಸಿಲು ಕುದುರೆಯೊಂದು ಎದಯಿಂದ ಓಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
ಕಣ್ಣು ಕಂಬನಿಯ ಮುಚ್ಚಿಡಲು ಹೆದರುವುದು
ನೆನ್ನೆ ಮೊನ್ನೆಗಳ ಎತ್ತಿಡಲಿ ಅನಿಸುವುದು
ಕೆಳಗೆ ಬಂದು ಮರಳಿ ಹೋದ ಹಾಳಾದ ಚಂದಿರ
ಅವಳು ಹೋದ ಮೇಲೆ ಬಂದನೋ ಒಂದೇ ಸುಂದರ
ಬರೆದು ಕೊಂಡೆ ಹಣೆಯ ರಂಗೋಲಿ
ಇನ್ನು ಮುಂದೆ ವಿರಹ ಮಾಮೂಲಿ
ನನ್ನ ನೆರಳಿಗೂ ದಾರಿ ಮರೆಯುತಿದೆ
ಕುರುಡು ಕನಸಿಗೆ ನೆನಪೇ ದೀವಟಿಗೆ
ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ
ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ
ಬಿಸಿಲು ಕುದುರೆಯೊಂದು ಎದಯಿಂದ ಓಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
ಕಣ್ಣಿನ ಕಡಲಲಿ ಮುಳುಗಡೆ ಆಗಿದೆ ನಾನೆ ಬಿಟ್ಟ ದೋಣಿ
ನೆನ್ನೆಯ ಪ್ರಶ್ನೆಗೆ ಉತ್ತರ ಎಲ್ಲಿದೆ ಅವಳು ತುಂಬಾ ಮೌನಿ
ಮೊದಲಿನಿಂದ ಮೋಹಿಸುವೆನು ಮರಳಿ ಬಂದರೆ ಅವಳು
ನನಗೂ ಗೊತ್ತು ಅವಳು ಬರಳೂ ನನ್ನ ಸ್ವಪ್ನದಲೂ
ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ
ಹೃದಯದ ತೋಟದೊಳಗಡೆ ಎಂದು ಅರಳದ ಹೂವಿನ ಬೆಳವಣಿಗೆ
ಎಲ್ಲಿಗೋ ಹೊರಟು ಹೋಗಿದೆ ನಂಗೂ ತಿಳಿಯದೆ ನನ್ನಯ ಮುಗುಳುನಗೆ
ಬಿಸಿಲು ಕುದುರೆಯೊಂದು ಎದಯಿಂದ ಓಡಿದಂತೆ
ಅವಳ ನೆನಪಿನಿಂದ ನದಿಯೊಂದು ಮೂಡಿದಂತೆ
Credits
Writer(s): Yogaraj Bhat, Sridhar Saravanan
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.