Testo Thaaye Thaaye - K. S. Chithra
Testo della canzone Thaaye Thaaye (K. S. Chithra), tratta dall'album Hoovu Hannu
ಜೋ ಜೋ ನನ್ನ ಮುದ್ದಿನ ಕಂದ ಗುಮ್ಮನು ಬಂದ ಳೊಳೊಳೊಳೊಳಾಯಿ
ಜೋ ಜೋ ನನ್ನ ಚಿನ್ನದ ಕಂದ ಚಂದಿರ ಬಂದ ಳೊಳೊಳೊಳೊಳಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ತಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ
ಕರುಳಕುಡಿಯ ಸುಖ ಕೋರಿ
ಗೂಡಿನಿಂದ ಹೊರ ಹಾರಿ
ಅಲೆವಳು
ದಣಿವಳು
ಅನುಕ್ಷಣ ಮಿಡಿವಳು
ಕಾಲ ಕೂಟವನು ಸಹಿಸಿ
ಕಾಮ ಕೂಟವನು ಕ್ಷಮಿಸಿ
ಜಗವನೇ
ಮಗುವಿನ
ಥರದಲಿ ತಿಳಿವಳು
ಅಳುವಳು ಅಭಾಲೆಯು ಎಂದು
ಉಳಿವಳು ಮಗುವಿದೆ ಎಂದು
ಪ್ರೇಮಮಯಿ ತಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ
ಗರ್ಭವೇ ತಾಯಿಯ ಸ್ವರ್ಗ
ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧಾರ್ಮ
ವಹಿಸಿದ ತಾಯಿಗೆ ಬ್ರಹ್ಮ
ತೊರೆವಳು ಸುಖ ಸಹವಾಸ
ಇರುವಳು ದಿನ ಉಪವಾಸ
ವೇದಮಯಿ ತಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ
ಯೌವ್ವನ
ಜೊತೆ ಬಡತನ
ಹಂಗಿಸೋ
ಆ ಸಿರಿತನ
ಈ ಉದರಕಾಗಿ ಈ ಅಧರಕೆ ಕಹಿ ಚುಂಬನ
ಈ ಬದುಕಿಗಾಗಿ ಈ ಮೌನದ ಆಕ್ರಂದನ
ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ತಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ
Credits
Writer(s): Hamsalekha
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.