Testo Devrigeno Kopa Bandu - Rajkumar
Testo della canzone Devrigeno Kopa Bandu (Rajkumar), tratta dall'album Baro Nanna Muddina Krishna (Original Motion Picture Soundtrack)
ದೇವ್ರಿಗೆನೋ ಕೋಪ ಬಂದು
ನಿನಂಥವರಿಗೆ ಜನ್ಮ ಕೊಟ್ಟ ಕಂದಾ
ಮುದ್ದುಕಂದ
ಹೆತ್ತರ್ವಗೇನೂ ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲ
ಕಂದಾ ಮಕರಂದಾ
ಕಸಹಾಕೋ ತೊಟ್ಟಿ ನಿನ್ನ ಪಾಲ ತೊಟ್ಟೀಲೂ
ಕಂದಾ ಎಲ್ಲೋಆಯಿತೆ ನಿನ್ನ ಹಾಲು ಬಟ್ಟಲೂ
ಕಸಹಾಕೋ ತೊಟ್ಟಿ ನಿನ್ನ ಪಾಲ ತೊಟ್ಟೀಲೂ
ಕಂದಾ ಎಲ್ಲೋ ಐತೆ ನಿನ್ನ ಹಾಲು ಬಟ್ಟಲೂ
ಇದೇನೂ ಲೋಕವೋ
ದೇವ್ರಿಗೆನೋ ಕೋಪ ಬಂದು
ನಿನಂಥವರಿಗೆ ಜನ್ಮ ಕೊಟ್ಟ ಕಂದಾ
ಮುದ್ದುಕಂದ
ಹೆತ್ತರ್ವಗೇನೂ ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲ
ಕಂದಾ ಮಕರಂದಾ
ಕೆಂಪಾದ ಸೂರ್ಯಂಗೆ ಅಪ್ಪಾ ಯಾರೋ
ತಂಪಾದ ಚಂದೀರಂಗೇ ಅಮ್ಮಾ ಯಾರೋ
ಜೀವಕ್ಕೆ ಜೀವ ನೀಡೊ ಮಿತ್ರ ಯಾರೋ
ಬೆನ್ನೀಗೆ ಚೂರೀಹಾಕೋ ನಂಟಾ ಯಾರೋ
ನೀತೀ ನಿದ್ದೆಮಾಡೊಲ್ಲಾ ಲೋಕಸತ್ತೂ ಹೋಗಲ್ಲಾ
ಪ್ರೀತೀ ಮಾಡೀ ನಾವೇಲ್ಲ
ಒಂಟೀ ಯಾರೂ ಇರೋಲ್ಲಾ
ಇದೇನೂ ಪ್ರೀತೀಯೋ
ದೇವ್ರಿಗೆನೋ ಕೋಪ ಬಂದು
ನಿನಂಥವರಿಗೆ ಜನ್ಮ ಕೊಟ್ಟ ಕಂದಾ
ಮುದ್ದುಕಂದ
ಹೆತ್ತರ್ವಗೇನೂ ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲ
ಕಂದಾ ಮಕರಂದಾ
ಸಾಕೀದ ಅಮ್ಮನಿಗೆ ಕೂಲಿಯೇನು
ನಿಯತ್ತು ಇದ್ದರೆ ಕಂದಾ ಬಾಳೂ ಜೇನೂ
ಇದ್ದಾಗ ದಾನ ಮಾಡೋ ಎಲೆ ಮಾನವ
ಇಲ್ದಾಗ ಕಾಯೂತೈತೆ ನಿನ್ನ ಜೀವವಾ
ಕೊಟ್ಟೂ ಕೆಟ್ಟೊರ್ಯಾರಿಲ್ಲ
ಬಿಟ್ಟು ಹೋಗರೆ ಎಲ್ಲಾ
ಪಟ್ಟು ಏನು ನಡೆಯೋಲ್ಲ
ಚೆಟ್ಟ ಏರ್ಲೆಬೇಕಲ್ಲ
ಇದೇನೂ ಮಾಯವೋ
ದೇವ್ರಿಗೆನೋ ಕೋಪ ಬಂದು
ನಿನಂಥವರಿಗೆ ಜನ್ಮ ಕೊಟ್ಟ ಕಂದಾ
ಮುದ್ದುಕಂದ
ಹೆತ್ತರ್ವಗೇನೂ ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲ
ಕಂದಾ ಮಕರಂದಾ
ಕಸಹಾಕೋ ತೊಟ್ಟಿ ನಿನ್ನ ಪಾಲ ತೊಟ್ಟೀಲೂ
ಕಂದಾ ಎಲ್ಲೋ ಐತೆ ನಿನ್ನ ಹಾಲು ಬಟ್ಟಲೂ
ಕಸಹಾಕೋ ತೊಟ್ಟಿ ನಿನ್ನ ಪಾಲ ತೊಟ್ಟೀಲೂ
ಕಂದಾ ಎಲ್ಲೋ ಐತೆ ನಿನ್ನ ಹಾಲು ಬಟ್ಟಲೂ
ಇದೇನೂ ಲೋಕವೋ
ದೇವ್ರಿಗೆನೋ ಕೋಪ ಬಂದು
ನಿನಂಥವರಿಗೆ ಜನ್ಮ ಕೊಟ್ಟ ಕಂದಾ
ಮುದ್ದುಕಂದ
ಹೆತ್ತರ್ವಗೇನೂ ರೋಗಬಂದು
ತೊಟ್ಟಿಯಲ್ಲಿ ಹಾಕಿದ್ರಲ್ಲ
ಕಂದಾ ಮಕರಂದಾ
Credits
Writer(s): Rajesh Ramanathan, Prakash Thrishuli
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.